Sports

Asian Games | ಮೊದಲ ಪಂದ್ಯದಲ್ಲಿ ಸುಲಭ ಜಯ ಗಳಿಸಿದ ಭಾರತದ ಕಬಡ್ಡಿ ತಂಡಗಳು

September 21, 2026 1,272 views 1 min read
Asian Games | ಮೊದಲ ಪಂದ್ಯದಲ್ಲಿ ಸುಲಭ ಜಯ ಗಳಿಸಿದ ಭಾರತದ ಕಬಡ್ಡಿ ತಂಡಗಳು

Asian Games | ಮೊದಲ ಪಂದ್ಯದಲ್ಲಿ ಸುಲಭ ಜಯ ಗಳಿಸಿದ ಭಾರತದ ಕಬಡ್ಡಿ ತಂಡಗಳು


Photo Credit : X ನಗೋಯ: ಜಪಾನ್‌ನಲ್ಲಿ ನಡೆಯುತ್ತಿರುವ 20ನೇ ಏಶ್ಯನ್ ಗೇಮ್ಸ್‌ನ ಕಬಡ್ಡಿ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಭಾರತದ ಪುರುಷರ ಹಾಗೂ ಮಹಿಳೆಯರ ತಂಡಗಳು ಕ್ರಮವಾಗಿ ಜಪಾನ್ ಹಾಗೂ ಬಾಂಗ್ಲಾದೇಶದ ವಿರುದ್ಧ ಸುಲಭ ಜಯ ಗಳಿಸಿವೆ. ಹಾಲಿ ಚಾಂಪಿಯನ್ ಭಾರತ ಪುರುಷರ ಕಬಡ್ಡಿ ತಂಡವು ‘ಎ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಜಪಾನ್ ವಿರುದ್ಧ 49-24 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಭಾರತ ತಂಡ ಪಂದ್ಯದ ಮೊದಲಾರ್ಧದಲ್ಲಿ 31-9 ಅಂಕಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿತು. ದ್ವಿತೀಯಾರ್ಧದಲ್ಲಿ 18 ಅಂಕ ಗಳಿಸಿತು. ಸೆ.22ರಂದು ಭಾರತದ ಪುರುಷರ ತಂಡವು ದ.ಕೊರಿಯಾ ವಿರುದ್ಧ ಕಣಕ್ಕಿಳಿಯುತ್ತಿದೆ. ಭಾರತದ ಮಹಿಳಾ ಕಬಡ್ಡಿ ತಂಡವು ‘ಎ’ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 42-21 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ. ಪಂದ್ಯದ ಮೊದಲಾರ್ಧದಲ್ಲಿ 21-10ರ ಮುನ್ನಡೆ ಸಾಧಿಸಿದ ಭಾರತ ತಂಡವು ದ್ವಿತೀಯಾರ್ಧದಲ್ಲಿ ಕೂಡ ಮುನ್ನಡೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಸೆ.23ರಂದು ಭಾರತ ಮಹಿಳಾ ತಂಡವು ಇರಾನ್ ವಿರುದ್ಧ ಮುಂದಿನ ಪಂದ್ಯವನ್ನಾಡಲಿದೆ.