Business

ಮತ್ತೆ ಏರಿದ ಚಿನ್ನ- ಬೆಳ್ಳಿಯ ಬೆಲೆ; ಮಂಗಳೂರಿನಲ್ಲಿ ಇಂದಿನ ದರವೆಷ್ಟು?

May 2, 2026 2,021 views 1 min read
ಮತ್ತೆ ಏರಿದ ಚಿನ್ನ- ಬೆಳ್ಳಿಯ ಬೆಲೆ; ಮಂಗಳೂರಿನಲ್ಲಿ ಇಂದಿನ ದರವೆಷ್ಟು?

ಮತ್ತೆ ಏರಿದ ಚಿನ್ನ- ಬೆಳ್ಳಿಯ ಬೆಲೆ; ಮಂಗಳೂರಿನಲ್ಲಿ ಇಂದಿನ ದರವೆಷ್ಟು?


ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆಗಳು ಕನಿಷ್ಠ ಬದಲಾವಣೆ ಕಂಡಿವೆ. ಮಾರ್ಚ್ ನಲ್ಲಿ ಚಿನ್ನದ ಬೆಲೆಗಳು ಸುಮಾರು ಶೇ 12ರಷ್ಟು ಕುಸಿತದ ನಂತರ ನಷ್ಟ ವಿಸ್ತರಿಸಿ ಎಪ್ರಿಲ್ ನಲ್ಲಿ ಶೇ 1ರಷ್ಟು ಕುಸಿದಿವೆ. ಇರಾನ್ ಯುದ್ಧದಿಂದಾಗಿ ಏರುತ್ತಿರುವ ಹಣದುಬ್ಬರದ ಕಳವಳಗಳಿಂದಾಗಿ ಹೂಡಿಕೆದಾರರು ಡಾಲರ್ ಮೇಲೆ ಹೆಚ್ಚು ಗಮನಹರಿಸುತ್ತಿದ್ದಾರೆ. ಹೀಗಾಗಿ ಚಿನ್ನದ ಬೆಲೆ ಮೇ 2ರಂದು ಹೆಚ್ಚು ಏರಿಳಿತ ಕಂಡಿಲ್ಲ. ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆಗಳು ಕನಿಷ್ಠ ಬದಲಾವಣೆ ಕಂಡಿವೆ. ಭಾರತೀಯ ಬಹು ಸರಕು ವಿನಿಯಮ ಕೇಂದ್ರ (ಎಂಸಿಎಕ್ಸ್) ಮುಚ್ಚಿರುವುದರಿಂದ ನೇರ ವ್ಯಾಪಾರ ದರಗಳು ಪ್ರಸ್ತುತ ಲಭ್ಯವಿಲ್ಲ. ಕೊನೆಯ ಮುಕ್ತಾಯದ ಹಂತಗಳ ಆಧಾರದ ಮೇಲೆ ಚಿನ್ನ ಇನ್ನೂ ಹತ್ತು ಗ್ರಾಂಗೆ 1.50 ಲಕ್ಷಕ್ಕಿಂತ ಹೆಚ್ಚಿನ ದರದಲ್ಲಿ ವಹಿವಾಟು ನಡೆಸುತ್ತಿದೆ. ಇಂದಿನ ಚಿನ್ನದ ದರ ಹೇಗಿದೆ? ಮೇ 2ರಂದು ಶನಿವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶುಕ್ರವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 33 ರೂ. ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,50,930 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 30 ರೂ. ಏರಿಕೆ ಕಂಡು ಹತ್ತು ಗ್ರಾಂಗೆ 1,38,350 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 25 ರೂ. ಏರಿಕೆಯಾಗಿ, ಹತ್ತು ಗ್ರಾಂಗೆ 1,13,200 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮೇ 2ರಂದು ಶನಿವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,093 (+33) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,835 (+30) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,320 (+25) ರೂ. ಬೆಲೆಗೆ ತಲುಪಿದೆ. ಬೆಳ್ಳಿಯ ದರ ಏರಿಕೆ ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿಯ ದರ, ಮಾರ್ಚ್ 09ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಏಪ್ರಿಲ್ ಆರಂಭದಲ್ಲಿ 2,55,000 ರೂ. ಗೆ ಬಂದು ತಲುಪಿದ ನಂತರ, ಈ ವಾರವಿಡೀ ಅದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿತ್ತು. ಆದರೆ ಗುರುವಾರ ಪ್ರತಿ ಗ್ರಾಂಗೆ 5 ರೂ. ಕುಸಿದ ಬೆಳ್ಳಿಯ ದರ ಮತ್ತೆ 2,50,000 ರೂ.ಗೆ ತಲುಪಿದೆ. ಶುಕ್ರವಾರ ಪ್ರತಿ ಗ್ರಾಂಗೆ 5 ರೂ. ಏರಿದ ಬೆಳ್ಳಿಯ ದರ ಮತ್ತೆ 2,55,000 ರೂ.ಗೆ ತಲುಪಿದೆ. ಇದೀಗ ಶನಿವಾರ ಪ್ರತಿ ಗ್ರಾಂಗೆ 10 ರೂ. ಏರಿದ ಬೆಳ್ಳಿಯ ದರ ಮತ್ತೆ 2,65,000 ರೂ.ಗೆ ತಲುಪಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,123 (+48) ರೂ., 22 ಕ್ಯಾರೆಟ್ ಚಿನ್ನದ ದರ 13,850 (+30) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,093 (+33) ರೂ., 22 ಕ್ಯಾರೆಟ್ ಚಿನ್ನದ ದರ 13,835 (+30) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,103 (+38) ರೂ., 22 ಕ್ಯಾರೆಟ್ ಚಿನ್ನದ ದರ 13,840 (+30) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,273 (+87) ರೂ., 22 ಕ್ಯಾರೆಟ್ ಚಿನ್ನದ ದರ 14,000 (+80) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,093 (+33) ರೂ., 22 ಕ್ಯಾರೆಟ್ ಚಿನ್ನದ ದರ 13,835 (+30) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,093 (+33) ರೂ., 22 ಕ್ಯಾರೆಟ್ ಚಿನ್ನದ ದರ 13,835 (+30) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,113 (+38) ರೂ., 22 ಕ್ಯಾರೆಟ್ ಚಿನ್ನದ ದರ 13,850 (+30) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,123 (+48) ರೂ., 22 ಕ್ಯಾರೆಟ್ ಚಿನ್ನದ ದರ 13,850 (+30) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,123 (+48) ರೂ., 22 ಕ್ಯಾರೆಟ್ ಚಿನ್ನದ ದರ 13,850 (+30) ರೂ.